Friday, February 15, 2013

ಮರುಳ ಕಾಗೆ

ಮರುಳ ಕಾಗೆ maruLa kaage


ಮರುಳ ಕಾಗೆ

ಕಾಗೆಯೊಂದು ಹಾರಿಬಂದು
ಮರದಮೇಲೆ ಕುಳಿತುಕೊಂಡು
ಬಾಯೊಳಿದ್ದ ಮಾಂಸವನ್ನು ತಿನ್ನತೊಡಗಿತು ।।

ಠಕ್ಕನರಿಯು ಇದನು ಕಂಡು
ಮಾಂಸವನ್ನು ಕಸಿಯಲೆಂದು
ಮರದಕೆಳಗೆ ಓಡಿಬಂದು ನಿಂತುಕೊಂಡಿತು ।।

ಕಾಕರಾಜ ನೀನು ನಮ್ಮ
ವನಕೆ ಬಹಳ ದಿನಕೆ ಬಂದೆ
ನಿನ್ನ ನೋಡಿ ನನ್ನ ಮನಕೆ ಹರುಷವಾಯಿತು ।।

ನಿನ್ನ ಗರಿಗಳೆಷ್ಟು ಚೆಂದ
ನಿನ್ನ ಬಣ್ಣವೆಷ್ಟು ಅಂದ
ನಿನ್ನ ರಾಗವನ್ನು ಕೇಳಿ ಜನರು ನಲಿವರು ।।

ಕಾಕರಾಜ ನೀನು ಈಗ
ಹಾಡನೊಂದು ಹಾಡು ಬೇಗ
ವನದೊಳಿರುವ ಪಶುಗಳೆಲ್ಲ ಕೇಳಿ ಕುಣಿಯಲಿ ।।

ಮರುಳ ಕಾಗೆ ನರಿಯ ನುಡಿಗೆ
ಮರಳುಗೊಂಡು ಹರುಷದಿಂದ
ಕಾವು ಕಾವು ಎಂದು ದೊಡ್ಡದನಿಯ ತೆಗೆಯಿತು ।।

ದನಿಯ ತೆಗೆಯಲೊಡನೆ ಅದರ
ಬಾಯೊಳಿದ್ದ ಮಾಂಸವೆಲ್ಲ
ನರಿಯ ಬಾಯಿಯೊಳಗೆ ಬಂದು ಬಿದ್ದುಬಿಟ್ಟಿತು ।।

ಮಾಂಸವನ್ನು ನುಂಗಿ ನರಿಯು
ಹರುಷದಿಂದ ಕುಣಿದು ಕುಣಿದು
ಕಾಗೆಯನ್ನು ನೋಡಿ ನಗುತ ನಿಂತಿತು ।।

ಮಾಂಸವನ್ನು ಕಳೆದುಕೊಂಡು
ಅದಕೆ ಬಹಳ ಬುದ್ಧಿ ಬಂದು
ಠಕ್ಕರನ್ನು ನಂಬಬೇಡಿ ಎಂದು ಸಾರಿತು ।।

Wednesday, January 02, 2013

ಮತ್ತೆ ಬಂತು ಸಂಕ್ರಾಂತಿ...

ಸಂಕ್ರಾಂತಿ Sankranti Pongal
ಮತ್ತೆ ಬಂತು ಸಂಕ್ರಾಂತಿ
ಎಳ್ಳು ಬೆಲ್ಲದ ಜೊತೆಯಲ್ಲಿ
ದುಡಿಮೆಯ ಮುಗಿಸಿದ
ಸಂಭ್ರಮ ರೈತನ ಮುಖದಲ್ಲಿ

ಗುಡ್ಡೆಯ ಸಾಲು ಹೊಲದಿ
ಧಾನ್ಯ ಧವಸ ಕಾಳು
ಉದ್ದನೆ ಕಬ್ಬಿನ ಜಲ್ಲೆ
ಆಯ್ತು ಸಮ ಸಮ ಪಾಲು

ಜೋಡಿ ಎತ್ತಿಗೆ ಸಿಂಗಾರ
ಚೆಂದದ ಚಕ್ಕಡಿ ಜೊತೆಗೆ
ಹಳ್ಳಿಯ ವಾಹನ ಅದುವೆ
ಎಲ್ಲ ರೈತರ ಮನೆಗೆ

ಚಿಣ್ಣರಿಗೆಲ್ಲಾ ಸಂಜೆಗೆ ಆರತಿ
ಅಜ್ಜಿಯ ಹರಕೆಯ ಹಾಡು
ಸಂಕ್ರಾಂತಿ ಅಂದರೆ
ಸಂತಸ, ಸಂಭ್ರಮ ಗೂಡು

--ಎಸ್. ಆರ್. ಸತ್ಯ ಕುಮಾರ್

Thursday, November 29, 2012

ಕರ್ನಾಟಕ ಮ್ಯಾಪ್

ಈ ಚಿತ್ರ ಬಿಡಿಸಿ ಬಣ್ಣ ತುಂಬಿದ್ದು ಎಂಟು ವರುಷದ ಪುಟ್ಟ ಬಾಲಕ ಸಮರ್ಥ್ ಮುತ್ಯಾಲಕರುನಾಡಿನಿಂದ ದೂರ ಬಹುದೂರ ಅಮೇರಿಕಾದಲ್ಲಿ ಬೆಳೆಯುತ್ತಿರುವ ಈ ಬಾಲಕ, ತನ್ನ ಅಮ್ಮನ ಸಹಾಯದಿಂದ ಇದನ್ನು ಬರೆದಿರುವನು. ಹೊರದೇಶದಲ್ಲಿ ಬೆಳೆಯುತ್ತಿರುವ ಮಕ್ಕಳು ತಮ್ಮ (ತಮ್ಮ ತಂದೆ ತಾಯಿಯರ) ನಾಡು ನುಡಿ ಬಗ್ಗೆ ಆಸಕ್ತಿಯಿಂದ ಕಲಿತು, ಒಲವು ಬೆಳೆಸಿಕೊಳ್ಳುತ್ತಿರುವುದನ್ನು ನೋಡಿ ಬಹಳ ಖುಷಿ ಆಗುತ್ತದೆ. ಇಂತಹ ಮಕ್ಕಳನ್ನು ಉತ್ತೇಜಿಸುತ್ತಿರುವ ಅವರ ತಂದೆ ತಾಯಿ ಮತ್ತು ಇತರೆ ಪೋಷಕರಿಗೆ ನನ್ನ ನಮನಗಳು. ಹಾಗೆಯೇ ಪುಟ್ಟ ಸಮರ್ಥನಿಗೆ ಶುಭಾಷಯಗಳು !

Thursday, November 01, 2012

ಕನ್ನಡ ಎ೦ದರೆ ಎ೦ತಹುದು ಮಗು


ಕನ್ನಡ ಎ೦ದರೆ ಎ೦ತಹುದು ಮಗು
ಕೇಳುವ ಕಿವಿಗೆ ಕಿಣಿ ಕಿಣಿ ಕಿಣಿ ಗೆಜ್ಜೆ
ಕನ್ನಡವೆ೦ದರೆ ಬಲು ಇ೦ಪು
ಹೇಳುವ ನಾಲಿಗೆಗೆ ಸಿಹಿ ಜೇನೇ ಅದು
ಕನ್ನಡವೆ೦ದರೆ ಬಲು ತ೦ಪು
ನಮ್ಮ ಕನ್ನಡವೆ೦ದರೆ ಇ೦ತಹುದು ಮಗು......

Monday, October 01, 2012

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು



ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ

ಗಾಂಧಿಗಿಂದು ಜನುಮ ದಿನ

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು

ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

ಎಂಟು ಹತ್ತು ಕೋಟಿ 
ಜನರ ನಾಡಿಯಲ್ಲಿ ನುಡಿಯುತ್ತಿದೆ
ಎಂಟು ಹತ್ತು ಕೋಟಿ 
ಜನರ ನಾಡಿಯಲ್ಲಿ ನುಡಿಯುತ್ತಿದೆ
ಗಾಂಧೀಜಿ ಬಾಪೂಜೀ
ಗಾಂಧೀಜಿ ಬಾಪೂಜೀ


ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ

ಗಾಂಧಿಗಿಂದು ಜನುಮ ದಿನ

ನಿಂದು ಖಡ್ಗ...
ಗಾಂಧಿಗೊಂದು ಹೂವು ಇಡು
ನಿಂದು...
ಗಾಂಧಿಗೊಂದು ಹೂವು ಇಡು
ತಕೋ ಕೈ ಇಕೋ ಕೈ
ತಕೋ ಕೈ ಇಕೋ ಕೈ

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

ಆಡು ಹಾಲು, ಹೆಸರು ಕ್ಷೀರಾ
ಬೇವು ಚಟ್ನಿ, ಗೋಧಿ ರೊಟ್ಟಿ
ಆಡು ಹಾಲು, ಹೆಸರು ಕ್ಷೀರಾ
ಬೇವು ಚಟ್ನಿ, ಗೋಧಿ ರೊಟ್ಟಿ
ಅಷ್ಟು ನೀರು ಅವನಿಗಿಡು
ಅಷ್ಟು ನೀರು ಅವನಿಗಿಡು

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

ಇಂಡಿಯದ ಮಗುವು ಗಾಂಧಿ
ಇಂಡಿಯದ ದೀಪ ಗಾಂಧಿ
ಇಂಡಿಯದ ಮಗುವು ಗಾಂಧಿ
ಇಂಡಿಯದ ದೀಪ ಗಾಂಧಿ
ಕಂಡು ಅವನ ಕುಣಿವ ಬಾರೋ
ಕಂಡು ಅವನ ಕುಣಿವ ಬಾರೋ

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

ತಟ್ಟು ತಟ್ಟು ಚಪ್ಪಾಳೆ ಪುಟ್ಟ ಮಗು
ತಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮ ದಿನ
ಗಾಂಧಿಗಿಂದು ಜನುಮ ದಿನ

Thursday, August 09, 2012

ಪುಟ್ಟ ಮುದ್ದು ಕೃಷ್ಣ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಂದನು ಮುದ್ದು ಕೃಷ್ಣ
ಬೆಣ್ಣೆ ಮುದ್ದೆ ಕದ್ದು
ತಿನ್ನೋ ಕಳ್ಳ ಕೃಷ್ಣ ! 

ನವಿಲ ಗರಿಯ ಸೊಗಸಿಗೆ
ಮನಸೋತ ಕೃಷ್ಣ
ತೆಗೆದು ತಲೆಯೊಳಿರಿಸಿ
ಮೆರೆವ ಪುಟಾಣಿ ಕೃಷ್ಣ

ಬಾರೋ ಬಾರೋ ನನ್ನ ಬಳಿ
ಬೇಗನೆ ಕೃಷ್ಣ
ಹಾಲು ಮೊಸರು ಬೆಣ್ಣೆ ಕೊಡುವೆ
ತಿನ್ನೋ ಕೃಷ್ಣ

***
ಕವಿ :ಸುಬ್ರಹ್ಮಣ್ಯ ಭಟ್

Saturday, July 28, 2012

ವರಮಹಾಲಕ್ಷ್ಮಿ ಹಬ್ಬ 2012

ಇಂದು ವರಮಹಾಲಕ್ಷ್ಮಿ ಹಬ್ಬ! ಬಹಳ ಸಂಭ್ರಮದಿಂದಲೇ  ಪುಟ್ಟಿ ಪೂಜೆ ಮಾಡಿದಳು. ಹೆಚ್ಚಿನ ಫೋಟೋಗಳು  ಇಲ್ಲಿವೆ.  
ವರಮಹಾಲಕ್ಷ್ಮಿ